Organisational Structure

ಖಾದಿ ಇತಿಹಾಸ

ಪೀಠಿಕೆ:

ಪೂಜ್ಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಹಾಗೂ ಸ್ವಾವಲಂಭೀ ಗ್ರಾಮ ಪರಿಕಲ್ಪನೆಯನ್ನು ಸಾಕಾರಗೊಳಿಸಲು, ರಾಷ್ಟ್ರದ ಸಂವಿಧಾನದ (ಅoಟಿsಣiಣuಣioಟಿ oಜಿ Iಟಿಜiಚಿ) ಆರ್ಟಿಕಲ್-43 ಅನ್ವಯ ಗ್ರಾಮೀಣ ಪ್ರದೇಶಗಳಲ್ಲಿ ವೈಯುಕ್ತಿಕ ಉದ್ದಿಮೆದಾರರ ಹಾಗೂ ಸಹಕಾರ ಸಂಘಗಳ ಮುಖಾಂತರ ಗುಡಿ (ಖಾದಿ ಗ್ರಾಮೋದ್ಯೋಗ) ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಲು ಶಾಸನದಂತೆ ರಾಷ್ಟ್ರಮಟ್ಟದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಏಪ್ರಿಲ್-1957 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಕೇಂದ್ರ ಸರ್ಕಾರದ ಸೂಕ್ಷ್ಮ, ಲಘು, ಮಧ್ಯಮ (ಒSಒಇ) ಉದ್ದಿಮೆಗಳ ಮಂತ್ರಾಲಯದಡಿ ಕೆಲಸ ನಿರ್ವಹಿಸುತ್ತಿದೆ. ಇದೇ ಉದ್ದೇಶಕ್ಕಾಗಿ ಎಲ್ಲಾ ರಾಜ್ಯಗಳಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗಳನ್ನು ಸ್ಥಾಪಿಸಲಾಗಿದ್ದು, ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಡಳಿಯು ಖಾದಿ ಮತ್ತು ಗ್ರಾಮೋದ್ಯೋಗ ಅಧಿನಿಯಮ 1956 (ಕರ್ನಾಟಕದ ಅಧಿನಿಯಮದ 1957) ರಂತೆ ದಿನಾಂಕ: 13-09-1957 ರಂದು ಅಸ್ತಿತ್ವಕ್ಕೆ ಬಂದು ಕರ್ನಾಟಕ ಸರ್ಕಾರದ ಶಾಸನಬದ್ಧ ಸ್ವಾಯತ್ತ ಸೇವಾ ಸಂಸ್ಥೆಯಾಗಿದ್ದು, ಲಾಭದಾಯಕ ಚಟುವಟಿಕೆಗಳನ್ನು ನಡೆಸುವ ಸಂಸ್ಥೆ ಇದಾಗಿರುವುದಿಲ್ಲ.

ಮಂಡಳಿಯ ಕಾರ್ಯಚಟುವಟಿಕೆಗಳು

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಕಾರ್ಯಚಟುವಟಿಕೆಗಳನ್ನು ಮೂರು ವಲಯಗಳನ್ನಾಗಿ ವಿಂಗಡಿಸಲಾಗಿದೆ.

ಖಾದಿ ವಲಯ

ಗ್ರಾಮೋದ್ಯೋಗ ವಲಯ

ಮಾರುಕಟ್ಟೆ ವಲಯ

ಧ್ಯೇಯೋದ್ದೇಶಗಳು:

ಹೇರಳ ಮಾನವ ಸಂಪನ್ಮೂಲ ಹೊಂದಿರುವ ಭಾರತ ದೇಶದಲ್ಲಿ ಗ್ರಾಮೀಣ ಜನತೆಗೆ ಬೇಸಾಯದ ಜೊತೆಗೆ ಖಾದಿ ಮತ್ತು ಗ್ರಾಮೋದ್ಯೋಗಗಳನ್ನು ಒದಗಿಸಿ ಗ್ರಾಮಸ್ವರಾಜ್ಯ ಹಾಗೂ ಸ್ವಾವಲಂಬಿ ಗ್ರಾಮಗಳ ಪರಿಕಲ್ಪನೆಯನ್ನು ಸಾಕಾರಗೊಳಿಸುವುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. ಈ ಸದುದ್ದೇಶಗಳನ್ನು ಈಡೇರಿಸಲು ಗ್ರಾಮೀಣ ಪ್ರದೇಶಗಳಲ್ಲಿ ಖಾದಿ ಮತ್ತು ಗ್ರಾಮೋದ್ಯೋಗಗಳಿಗೆ ಆದ್ಯತೆ ನೀಡಿ, ಅವುಗಳ ಸ್ಥಾಪನೆಗೆ ತರಬೇತಿ, ಆರ್ಥಿಕ ಹಾಗೂ ತಾಂತ್ರಿಕ ನೆರವು, ಗ್ರಾಮೀಣ ಕೈಗಳಿಗೆ ನಿರಂತರ ಕೆಲಸ, ಜೀವನಾವಶ್ಯಕ ವಸ್ತುಗಳ ಉತ್ಪಾದನೆ ಹಾಗೂ ಮಾರುಕಟ್ಟೆ, ಗ್ರಾಮೀಣ ಪ್ರದೇಶದ ಆರ್ಥಿಕ ಅಭಿವೃದ್ದಿ, ಗ್ರಾಮ ಸ್ವರಾಜ್ಯ ಸ್ಥಾಪನೆ, ಗ್ರಾಮೀಣ ಗುಡಿ / ಸಣ್ಣ ಕೈಗಾರಿಕೀಕರಣ ಇವುಗಳ ಮುಖಾಂತರ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಿ, ಗ್ರಾಮೀಣ ಕಸಬುದಾರರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವುದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಪ್ರಮುಖ ಗುರಿಯಾಗಿದೆ.

ಮಂಡಳಿಯು ಜಾರಿಗೊಳಿಸಿರುವ ಯೋಜನೆಗಳಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ವಿಕಲಚೇತನರು, ಮಹಿಳೆಯರು, ಮಾಜಿ ಯೋದರು ಹಾಗೂ ಮುಂತಾದ ಇತರೆ ವರ್ಗಗಳಿಗೆ ಸೇರಿದ ಗ್ರಾಮೀಣ ಜನತೆಗೆ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ. ಈ ಯೋಜನೆಗಳಿಂದ ಗ್ರಾಮೀಣ ಜನತೆ ನಗರಗಳಿಗೆ / ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆದಂತಾಗುತ್ತದೆ. ಖಾದಿ ಆಯೋಗ / ಕೇಂದ್ರ / ರಾಜ್ಯ ಸರ್ಕಾರಗಳ ವಿವಿಧ ಅಭಿವೃದ್ದಿ ಯೋಜನೆಗಳನ್ನು ಮಂಡಳಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಇವುಗಳ ಯೋಜನಾ ವೆಚ್ಚವನ್ನು ಮಾತ್ರ ಖಾದಿ ಆಯೋಗ, ಕೇಂದ್ರ / ರಾಜ್ಯ ಸರ್ಕಾರಗಳು ಭರಿಸುತ್ತಿವೆ. ಖಾದಿ ಆಯೋಗ / ಕೇಂದ್ರ ಸರ್ಕಾರ ಮಂಡಳಿಗೆ ಯಾವುದೇ ಆಡಳಿತಾತ್ಮಕ ವೆಚ್ಚಗಳನ್ನು ಭರಿಸುವುದಿಲ್ಲ. ಈ ಯೋಜನೆಗಳನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸುತ್ತಿರುವುದರಿಂದ ಹಾಗೂ ಮಂಡಳಿಯು ಸೇವೆ ನೀಡುವ ಸಂಸ್ಥೆಯಾಗಿರುವುದರಿಂದ ಮತ್ತು ಮಂಡಳಿಯ ನಿರ್ವಹಣೆ ಕರ್ನಾಟಕ ಸರ್ಕಾರದ ನಿಯಂತ್ರಣದಲ್ಲಿ ಇರುತ್ತದೆ. ಆದ್ದರಿಂದ ರಾಜ್ಯ ಸರ್ಕಾರವೇ ಈ ಆಡಳಿತಾತ್ಮಕ ನಿರ್ವಹಣಾ ವೆಚ್ಚಗಳನ್ನು ಭರಿಸುತ್ತಿದೆ.