Khadi

ಖಾದಿ ಬ್ರಾಂಡಿಂಗ್ ಯೋಜನೆ

ಖಾದಿ ಬ್ರಾಂಡಿಂಗ್

ಖಾದಿ ಕ್ಷೇತ್ರವು ಯುವ ಜನರನ್ನು ಅಕರ್ಷಿಸಲು ಹಾಗೂ ಮಾರುಕಟ್ಟೆಯ ಸ್ವರ್ಧೆಗಳಿಗೆ ಅನುಗುಣವಾಗಿ ಬೆಳೆಯುಲು ಅಗತ್ಯವಾದ ಕ್ರಮ ಕೈಗೊಳ್ಳಲು ಕರ್ನಾಟಕ ಸರ್ಕಾರವು 2015-16 ನೇ ಸಾಲಿನಲ್ಲಿ ಕರ್ನಾಟಕ ಖಾದಿ ಬ್ರಾಂಡಿಂಗ್ ಯೋಜನೆಯನ್ನು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ನಿಫ್ಟ್) ಸಂಸ್ಥೆಯ ಸಹಾಯದೊಂದಿಗೆ ಅನುಷ್ಠಾನಗೊಳಿಸಲು ಹಾಗೂ ಅಗತ್ಯವಾದ ಅರ್ಥಿಕ ನೆರವನ್ನು ನೀಡಲು ಅನುಮೋದನೆ ನಿಡಿರುತ್ತದೆ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ವಿವಿದ ಹಂತಗಳಲ್ಲಿ ಸರ್ಕಾರದ, ನಿಫ್ಟ್ ಸಂಸ್ಥೆಯ ಮತ್ತು ಖಾದಿ ಮಂಡಳಿ ಮತ್ತು ರಾಜ್ಯದ ಖಾದಿ ಸಂಘ ಸಂಸ್ಥೆಗಳ ಸಭೆಗಳನ್ನು ಹಲವಾರು ಬಾರಿ ಈಗಾಗಲೇ ನಡೆಸಲಾಗಿರುತ್ತದೆ.
ನಂತರದಲ್ಲಿ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (NIFT) ಸಂಸ್ಥೆಯೊಂದಿಗೆ 2014-15 ನೇ ಸಾಲಿನ ವರ್ಷದ ಅಂತ್ಯದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಒಂಡಂಬಡಿಕೆ (MOU) ಮಾಡಿಕೊಳ್ಳಲಾಗಿದೆ ಅದರಂತೆ ಪ್ರಥಮ ಹಂತವಾಗಿ ನಿಫ್ಟ್ ಸಂಸ್ಥೆಯವರು Diagnostic Study Report ಸಲ್ಲಿಸಿದ್ದು ಅದನ್ನು ಪರಿಷ್ಕಿಸಿ Revised study Report ಸಲ್ಲಿಸಿದ್ದು ಅದರಲ್ಲಿ ಖಾದಿ ಸಂಘ ಸಂಸ್ಥೆಗಳು ಉತ್ಪಾದಿಸುವ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ. ಖಾದಿ ಬ್ರಾಂಡಿಂಗ್ ಯೋಜನೆಯ ಬಗ್ಗೆ ಸಂಬಂಧಪಟ್ಟ Home Fashion, Corporate gift, apparels ಮತ್ತು Accessories ವಿಭಾಗಗಳ 400ಕ್ಕೂ ಹೆಚ್ಚು ಹೊಸ ಹೊಸ ವಿನ್ಯಾಸಗಳನ್ನು ಪ್ರದರ್ಶಿಸಿದ್ದು ಅವುಗಳನ್ನು ನಿಫ್ಟ್ ಸಂಸ್ಥೆಯ ವಾರ್ಷಿಕ ದಿನಾಚರಣೆ ಸಂದರ್ಭದಲ್ಲಿ ಅಂದಿನ ಕರ್ನಾಟಕ ಸರ್ಕಾರದ ಮಾನ್ಯ ಸಣ ಕೈಗಾರಿಕೆ ಸಚಿವರು ವಿನ್ಯಾಸಗಳ ಪ್ರದರ್ಶನವನ್ನು ಉದ್ಘಾಟನೆ ಮಡಿರುತ್ತಾರೆ. ಖಾದಿ ಬ್ರಾಂಡಿಂಗ್ ಉಡುಪುಗಳನ್ನು (ನವ ವಿನ್ಯಾಸ) ತಯಾರಿಸಲು ಖಾದಿ ಸಂಘ-ಸಂಸ್ಥೆಗಳ 205 ನುರಿತ ಟೈಲರ್ಗ್ಳಿಗೆ ಹಾಗೂ ಕ್ರಿಯಾಶೀಲ ಕಾರ್ಯಕರ್ತರಿಗೆ ನಿಫ್ಟ್ ಸಂಸ್ಥೆಯಿಂದ 03 ಹಂತಗಳಲ್ಲಿ ತರಬೇತಿಯನ್ನು ನೀಡಲಾಗಿರುತ್ತದೆ. ನಾಲ್ಕನೇ ಹಂತದ ತರಬೇತಿ ಜಾರಿಯಲ್ಲಿರುತ್ತದೆ. ಈ ಯೋಜನೆಯ ಅವಧಿಯನ್ನು 2016-17 ಮತ್ತು 2017-18 ನೇ ಸಾಲಿನವರೆಗೆ ವಿಸ್ತರಿಸಲು ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿದೆ.
ಇದುವರೆಗೂ ನಿಫ್ಟ್‍ನಿಂದ ವಿವಿದ ವಿನ್ಯಾಸದಡಿ 258 ಕಸುಬುದಾರರಿಗೆ ಟೈಲರಿಂಗ್ ತರಬೇತಿ ನೀಡಲಾಗಿದೆ.